ನವದೆಹಲಿ: ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ನಲ್ಲಿ ಕೈಯಲ್ಲಿ ಟೀ ಕಪ್ ಹಿಡಿದು ನಗುವ ಯುವಕನ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಈ ಸ್ಮೈಲಿಂಗ್ ಸ್ಟಾರ್ ಬೇರೆ ಯಾರೂ ಅಲ್ಲ, ತೆಲಂಗಾಣದ ಹಳ್ಳಿಯೊಂದರ ಅರುಣ್ ಎಂಬ ಸಾಮಾನ್ಯ ಯುವಕ. ಲಾರಿ ಕ್ಲೀನರ್ ಆಗಿ ಕೆಲಸ ಮಾಡುವ ಅರುಣ್, ತನ್ನ ಸಹೋದ್ಯೋಗಿ ನೆಹರು ಹೇಳಿದ ಜೋಕ್ ಕೇಳಿ ನಕ್ಕ ಕ್ಷಣವನ್ನು ವಿಡಿಯೋ ಮಾಡಿ ಹಂಚಿಕೊಳ್ಳಲಾಗಿತ್ತು. ಕೇವಲ ಒಂದೂವರೆ ತಿಂಗಳಲ್ಲೇ ಈ ವಿಡಿಯೋ 40 ಮಿಲಿಯನ್ ವೀಕ್ಷಣೆ ಪಡೆದಿದೆ. ಬಡತನದ ಕಾರಣ ನಾಲ್ಕನೇ ತರಗತಿಗೆ ಶಾಲೆ ಬಿಟ್ಟಿದ್ದ ಅರುಣ್, ಈಗ ನೆಹರು ಪ್ರೋತ್ಸಾಹದಿಂದ ಹತ್ತನೇ ತರಗತಿ ಪಾಸಾಗಿದ್ದಾನೆ.
"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.