ಹೊಸ ಕಾರಿನ ಪಬ್ಲಿಸಿಟಿಗೆ ದೈವದ ವೇಷ - ಎತ್ತ ಸಾಗುತ್ತಿದೆ ನಮ್ಮ ಕರಾವಳಿ ಸಂಸ್ಕೃತಿ?
- sathyapathanewsplu
- Oct 17
- 1 min read

ಕರಾವಳಿ ಸಂಸ್ಕೃತಿಯ ಜೀವಾಳವಾದ ದೈವಾರಾಧನೆಯನ್ನು ಕೆಲವರು ಮನರಂಜನೆಗಾಗಿ ದುರುಪಯೋಗ ಪಡಿಸುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.
ಕಾಂತಾರ ಚಿತ್ರ ಬಿಡುಗಡೆಯಾದ ಬಳಿಕ ದೈವದ ವೇಷಭೂಷಣ, ಕೂಗು-ಅರಚಾಟ ಹಾಗೂ ನೃತ್ಯ ಶೈಲಿಯನ್ನು ಅನುಕರಿಸುತ್ತಾ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋಗಳನ್ನು ಹಾಕುತ್ತಿರುವುದು ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತಾಗಿ ಅನೇಕ ದೈವ ನರ್ತಕರು ಹಾಗೂ ದೈವಾರಾಧಕರು ಈಗಾಗಲೇ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂತಾರ ಚಿತ್ರದ ಕುರಿತು ಕೂಡ ಕೆಲವರು ವಿರೋಧ ಮಾಡಿದ್ದಾರೆ. ಇದರ ನಡುವೆಯೇ ಇಲ್ಲೊಬ್ಬ ಭೂಪ ತಾನು ಖರೀದಿಸಿದ ಹೊಸ ಪ್ರಮೋಷನ್ ಗೆ ದೈವವನ್ನು ಬಳಕೆ ಮಾಡಿಕೊಂಡು ಮೂರ್ಖತನದ ಪರಮಾವಧಿಯನ್ನು ಮೆರೆದಿದ್ದಾನೆ.
ಇದೀಗ ತಮಿಳುನಾಡಿನಲ್ಲಿ ಮತ್ತೊಂದು ವಿಚಿತ್ರ ಘಟನೆ ನಡೆದಿದೆ. ಅಲ್ಲಿ ಒಬ್ಬ ವ್ಯಕ್ತಿ ತನ್ನ ಹೊಸ ಆಡಿ ಕಾರಿನ ಪ್ರಚಾರಕ್ಕಾಗಿ ದೈವದ ವೇಷ ತೊಡಿಸಿ ಹುಚ್ಚಾಟ ಮೆರೆದಿದ್ದಾನೆ.
ಹಿನ್ನೆಲೆಯಾಗಿ ಕಾಂತಾರ ಚಿತ್ರದ ಸಂಗೀತವನ್ನು ಹಾಕಿಕೊಂಡು, ದೈವದ ನೃತ್ಯದಂತೆ ಕಾರಿನ ಸುತ್ತ ಕೂಗಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವೀಡಿಯೋದಲ್ಲಿ ದೈವದ ವೇಷ ತೊಟ್ಟ ವ್ಯಕ್ತಿ ಕಾರಿನ ಸುತ್ತ ಕುಣಿದು ಕಾರಿನ ದಾಖಲೆಗಳನ್ನು "ದೈವವೇ" ಮಾಲೀಕನಿಗೆ ನೀಡುತ್ತಿರುವಂತೆ ತೋರಿಸಲಾಗಿದೆ. ಈ ಘಟನೆ ದೈವಾರಾಧಕರ ಹಾಗೂ ಕರಾವಳಿಯ ಭಕ್ತವೃಂದದ ಕೋಪಕ್ಕೆ ಕಾರಣವಾಗಿದೆ.
ಮತ್ತೆ ಏರಿಕೆ ಕಂಡ ಚಿನ್ನದ ದರ






Comments