ಇತಿಹಾಸ ಪ್ರಸಿದ್ಧ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಧನು ಪೂಜೆ ಆಮಂತ್ರಣ ಪತ್ರಿಕೆ ಬಿಡುಗಡೆ
- sathyapathanewsplu
- Nov 29
- 1 min read

ಇತಿಹಾಸ ಪ್ರಸಿದ್ಧವಾದ ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಡಿಸೆಂಬರ್ 16 ರಿಂದ ಆರಂಭಗೊಳ್ಳಲಿರುವ ಧನು ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ನವೆಂಬರ್ 29 ರಂದು ದೇವಳದ ಅಕ್ಷಯ ಮಂದಿರದಲ್ಲಿ ನೆರವೇರಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೇಶವ ಕೊಳಲು ಮೂಲೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪಿ.ಬಿ. ದಿವಾಕರ ರೈ ಮತ್ತು ವ್ಯವಸ್ಥಾಪನ ಸಮಿತಿ ನಿಕಟ ಪೂರ್ವ ಅಧ್ಯಕ್ಷರಾದ ಕಿಶೋರ್ ಕುಮಾರ್ ಉಳುವಾರು ಅವರು ವೇದಿಕೆಯನ್ನು ಅಲಂಕರಿಸಿದ್ದರು. ನಿರಂತರ ಒಂದು ತಿಂಗಳ ಕಾಲ, ಪ್ರತಿದಿನ ಪ್ರಾತಃಕಾಲದಲ್ಲಿ ಶ್ರೀ ಕ್ಷೇತ್ರದಲ್ಲಿ ಧನು ಪೂಜೆಯ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ.
ಈ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ತೀರ್ಥರಾಮ ಪರ್ನೋಜಿ, ಕೆ.ಕೆ. ಬಾಲಕೃಷ್ಣ ಕುಂಟುಕಾಡು, ತಿಮ್ಮಯ್ಯ ಮೆತ್ತಡ್ಕ, ಮಾಲತಿ ಭೋಜಪ್ಪ, ಚಂಚಲಾಕ್ಷಿ ನಾಗೇಂದ್ರ ಕುಲ್ಟಾರು, ಅರಂತೋಡು ವಸಂತ ಪೆಲ್ತಡ್ಕ ಅವರು ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. ಮಾಜಿ ಸದಸ್ಯರುಗಳಾದ ಕೆ.ಕೆ. ನಾರಾಯಣ, ಎಸ್.ಪಿ. ಲೋಕನಾಥ, ಗಣಪತಿ ಭಟ್, ತಾ.ಪಂ. ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಹಾಗೆಯೇ ಭಜನಾ ಮಂಡಳಿ ಅಧ್ಯಕ್ಷರಾದ ಚಂದ್ರಶೇಖರ ಆಚಾರ್ಯ, ಜನಾರ್ಧನ ಬಾಳೆಕಜೆ, ಮಹೇಶ್ ಕುತ್ತಮೊಟ್ಟೆ, ಕಮಲಾಕ್ಷ ಪಡ್ಡು ಮತ್ತು ಕದಿರೇಶನ್ ಪಿಲೈ ಸಭೆಯಲ್ಲಿ ಹಾಜರಿದ್ದರು.
ಈ ಒಂದು ತಿಂಗಳ ಧನು ಪೂಜಾ ಅವಧಿಯಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಧನುಪೂಜೆ ಪ್ರಯುಕ್ತ ಪ್ರತಿದಿನ ಮುಂಜಾನೆ ಸುಳ್ಯದಿಂದ ತೊಡಿಕಾನಕ್ಕೆ ಬರಲು ಅನುಕೂಲವಾಗುವಂತೆ ಅವಿನಾಶ್ ಬಸ್ಸಿನ ವಿಶೇಷ ವ್ಯವಸ್ಥೆ ಇರಲಿದೆ. ಬಸ್‌ನ ಮಾಲೀಕರಾದ ಅವಿನಾಶ್ ರೈ ಅವರು ಸಹ ಈ ಸಭೆಯಲ್ಲಿ ಭಾಗವಹಿಸಿ ಸಹಕಾರ ನೀಡಿದರು. ದೇವಸ್ಥಾನದ ಕಚೇರಿ ವ್ಯವಸ್ಥಾಪಕರಾದ ಆನಂದ ಕಲಗದ್ದೆ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಭಕ್ತರು ಈ ಧನು ಪೂಜೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ವ್ಯವಸ್ಥಾಪನ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.






Comments