;
top of page

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ!

  • Writer: sathyapathanewsplu
    sathyapathanewsplu
  • Nov 8
  • 1 min read
ree

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್ 16, 2025 ರಿಂದ ಡಿಸೆಂಬರ್ 02, 2025 ರ ವರೆಗೆ ಮಹತೋಭಾರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.


ಸುಬ್ರಹ್ಮಣ್ಯ ದೇವಸ್ಥಾನವು ಭಕ್ತರ ದಂಡು ಹರಿದುಬರುವ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಈ ವರ್ಷದ ಜಾತ್ರಾ ಮಹೋತ್ಸವದ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರಗಳು ಈ ಕೆಳಗಿನಂತಿವೆ:


* ನವೆಂಬರ್ 16, 2025 (ಭಾನುವಾರ): ಅಂಗಾರಕ ವೃತ - ಅಕ್ಷಯ ಬಂಡಿ ಉತ್ಸವ.

* ನವೆಂಬರ್ 17, 2025 (ಸೋಮವಾರ): ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ.

* ನವೆಂಬರ್ 18, 2025 (ಮಂಗಳವಾರ): ರಾತ್ರಿ ಚಂದ್ರಮಂಡಲ ಬಂಡಿ ಉತ್ಸವ.

* ನವೆಂಬರ್ 19, 2025 (ಬುಧವಾರ): ಲಕ್ಷದೀಪೋತ್ಸವ ಮತ್ತು ರಾತ್ರಿ ಲಕ್ಷಣದೀಪೋತ್ಸವಯುಕ್ತ ಬಂಡಿ ಉತ್ಸವ.

* ನವೆಂಬರ್ 20, 2025 (ಗುರುವಾರ): ರಾತ್ರಿ ಕಲ್ಯಾಣೋತ್ಸವ.

* ನವೆಂಬರ್ 21, 2025 (ಶುಕ್ರವಾರ): ರಾತ್ರಿ ಅಕ್ಷಯಬಂಡಿ ಉತ್ಸವ.

* ನವೆಂಬರ್ 22, 2025 (ಶನಿವಾರ): ರಾತ್ರಿ ಮಂಟಪ ಉತ್ಸವ.

* ನವೆಂಬರ್ 23, 2025 (ಭಾನುವಾರ): ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ.

* ನವೆಂಬರ್ 24, 2025 (ಸೋಮವಾರ): ರಾತ್ರಿ ಚಂದ್ರಮಂಡಲ ಬಂಡಿ ಉತ್ಸವ.

* ನವೆಂಬರ್ 25, 2025 (ಮಂಗಳವಾರ): ರಾತ್ರಿ ಪೂಜೆಯುಕ್ತ ಹೂವಿನತೇರಿನ ಉತ್ಸವ.

* ನವೆಂಬರ್ 26, 2025 (ಬುಧವಾರ): ಪ್ರಥಮ ಷಷ್ಠಿ ದಿನದಂದು ಪಂಚಾಮೃತ ಮಹಾಭಿಷೇಕ.

* ನವೆಂಬರ್ 27, 2025 (ಗುರುವಾರ): ಪ್ರಥಮ ಏಕಾದಶಿಯಂದು ದೀಪಾರಾಧನೆಯುಕ್ತ ಪಾಲಕಿ ಉತ್ಸವ.

* ಡಿಸೆಂಬರ್ 02, 2025 (ಮಂಗಳವಾರ): ತೆಂಕುತಿಟ್ಟಿನ ಶೇಷವಾಹನಯುಕ್ತ ಬಂಡಿ ಉತ್ಸವ ಹಾಗೂ ಧ್ವಜಾವರೋಹಣದ ನಂತರ ಮಹಾಮಂಗಳಾರತಿ ನಡೆಯಲಿದೆ

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page