ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ – ಜೈಲಿನಲ್ಲಿ ದರ್ಶನ್ ಗಲಾಟೆ ವದಂತಿ, ಅಧಿಕಾರಿಗಳ ಖಂಡನೆ
- sathyapathanewsplu
- Dec 9
- 1 min read

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇತರೆ ಆರೋಪಿಗಳ ಜೊತೆ ರಂಪಾಟ ನಡೆಸಿದ್ದಾರೆ ಎನ್ನುವ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ದರ್ಶನ್, ಆರ್. ನಾಗರಾಜ್, ಚಾಲಕ ಲಕ್ಷ್ಮಣ್, ಉದ್ಯಮಿ ಪ್ರದೂಷ್ ರಾವ್ ಹಾಗೂ ಆಟೋ ಚಾಲಕರು ಅನುಕುಮಾರ್ (ಅನು), ಜಗದೀಶ್ (ಜಗ್ಗ) – ಎಲ್ಲರೂ ಒಂದೇ ಬ್ಯಾರಕ್‌ನಲ್ಲಿ ಇರಿಸಿರುವುದು ತಿಳಿದುಬಂದಿದೆ.
ದರ್ಶನ್ ಅವರು ಆರ್. ನಾಗರಾಜ್ ಹೊರತುಪಡಿಸಿ ಉಳಿದವರ ಜೊತೆ ಗಲಾಟೆ, ಅವಾಚ್ಯ ಶಬ್ದ ಬಳಕೆ ಹಾಗೂ ಕಾಲಿನಿಂದ ಒದ್ದಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದರೂ, ಕಾರಾಗೃಹದ ಎಸ್‌ಪಿ ಅಂಶುಕುಮಾರ್ ಅವರು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.
“ದರ್ಶನ್ ಇರುವ ಬ್ಯಾರಕ್‌ನಲ್ಲಿ ಯಾವುದೇ ಗಲಾಟೆ ನಡೆದಿಲ್ಲ ಎಂಬ ಮಾಹಿತಿ ನಮಗೆ ಇದೆ. ಹರಿದಾಡುತ್ತಿರುವ ವದಂತಿಯನ್ನು ಪರಿಶೀಲಿಸುತ್ತಿದ್ದೇವೆ. ಜೈಲು ಸಿಬ್ಬಂದಿಗೆ ಅಗತ್ಯ ಸೂಚನೆ ನೀಡಲಾಗಿದೆ” ಎಂದು ಅವರು ತಿಳಿಸಿದ್ದಾರೆ.






Comments