ವಿಶ್ವದಾಖಲೆ: ಬಿಹಾರದಲ್ಲಿ ಜಗತ್ತಿನ ಅತಿದೊಡ್ಡ ಏಕಶಿಲಾ ಶಿವಲಿಂಗ ಪ್ರತಿಷ್ಠಾಪನೆ!
- sathyapathanewsplu
- 3 days ago
- 1 min read

ಮೋತಿಹರಿ: ಭಾರತದ ಆಧ್ಯಾತ್ಮಿಕ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಾಗಿದ್ದು, ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಕೈಟ್ವಾಲಿಯಾ ಗ್ರಾಮದಲ್ಲಿ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗವನ್ನು ಅಧಿಕೃತವಾಗಿ ಪ್ರತಿಷ್ಠಾಪಿಸಲಾಗಿದೆ. ನಿರ್ಮಾಣ ಹಂತದಲ್ಲಿರುವ ಭವ್ಯ 'ವಿರಾಟ್ ರಾಮಾಯಣ ದೇವಾಲಯ' ಸಂಕೀರ್ಣದಲ್ಲಿ ಈ ಐತಿಹಾಸಿಕ ಘಟನೆ ನಡೆದಿದೆ. ವಾರಣಾಸಿ ಮತ್ತು ಅಯೋಧ್ಯೆಯ ವಿದ್ವಾಂಸರು ವೇದಘೋಷಗಳೊಂದಿಗೆ ಪ್ರಾಣ ಪ್ರತಿಷ್ಠೆ ನೆರವೇರಿಸಿದರು. ಈ ಸಂಭ್ರಮದ ವೇಳೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು.
ಕೇವಲ ಗ್ರಾನೈಟ್ ಶಿಲೆಯಿಂದ ಕೆತ್ತಲ್ಪಟ್ಟಿರುವ ಈ ಶಿವಲಿಂಗವು 33 ಅಡಿ ಎತ್ತರ ಹೊಂದಿದ್ದು, ಸುಮಾರು 210 ಮೆಟ್ರಿಕ್ ಟನ್ ತೂಕವಿದೆ. ಇಷ್ಟು ಬೃಹತ್ ಲಿಂಗವನ್ನು ಸ್ಥಾಪಿಸಲು ಬೃಹತ್ ಕ್ರೇನ್‌ಗಳನ್ನು ಬಳಸಲಾಗಿತ್ತು. ಈ ಮೂಲಕ ಭಾರತವು ಧಾರ್ಮಿಕ ಮತ್ತು ವಾಸ್ತುಶಿಲ್ಪದ ಕ್ಷೇತ್ರದಲ್ಲಿ ಮತ್ತೊಂದು ಜಾಗತಿಕ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ. ಸದ್ಯ ಈ ಸ್ಥಳವು ಭಕ್ತರ ಮತ್ತು ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರವಾಗಿ ಮಾರ್ಪಟ್ಟಿದೆ.





Comments