ಶಬರಿಮಲೆ ದೇವಾಲಯದಲ್ಲಿ ಚಿನ್ನಾಭರಣ ಕಳವು ಪ್ರಕರಣ: ಎಸ್‌ಐಟಿ ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ
- sathyapathanewsplu
- Jan 2
- 1 min read

ಶಬರಿಮಲೆ: ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಗರ್ಭಗೃಹದ ಕಲಾಕೃತಿಗಳಲ್ಲಿದ್ದ ಭಾರಿ ಪ್ರಮಾಣದ ಚಿನ್ನ ನಾಪತ್ತೆಯಾಗಿರುವುದು ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯಿಂದ ದೃಢಪಟ್ಟಿದೆ. ಗರ್ಭಗೃಹದ ಬಾಗಿಲ ಚೌಕಟ್ಟುಗಳಲ್ಲಿ ಕೆತ್ತಲಾಗಿದ್ದ 'ಶಿವ' ಹಾಗೂ 'ಯಾಲಿ ರೂಪಂ' ಬಿಂಬಗಳಿಗೆ ಹೊದಿಸಲಾಗಿದ್ದ ಚಿನ್ನದ ಲೇಪನವನ್ನು ಕಳವು ಮಾಡಲಾಗಿದೆ ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಈ ಘಟನೆಯು ಭಕ್ತರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ.
ಸದ್ಯ ಪೊಲೀಸರು ವಿವಿಧ ಜ್ಯುವೆಲ್ಲರಿಗಳಿಂದ ಒಟ್ಟು 584 ಗ್ರಾಂ ಚಿನ್ನವನ್ನು ಮಾತ್ರ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಚೆನ್ನೈನ ಸ್ಮಾರ್ಟ್ ಕ್ರಿಯೇಶನ್ಸ್‌ನಿಂದ 110 ಗ್ರಾಂ ಮತ್ತು ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿಯಿಂದ 474 ಗ್ರಾಂ ಚಿನ್ನ ಲಭ್ಯವಾಗಿದೆ. ಆದರೆ, ದೇವಾಲಯದಿಂದ ಕಳವಾಗಿರುವ ಚಿನ್ನದ ಪ್ರಮಾಣ ಇದಕ್ಕಿಂತಲೂ ಅಧಿಕವಾಗಿದ್ದು, ಉಳಿದ ಚಿನ್ನವನ್ನು ಪತ್ತೆಹಚ್ಚಲು ತನಿಖಾ ತಂಡಕ್ಕೆ ಇನ್ನೂ ಸಾಧ್ಯವಾಗಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ.
ವಶಪಡಿಸಿಕೊಳ್ಳಲಾದ ಚಿನ್ನವು ದೇವಾಲಯದ್ದೇ ಎಂದು ಖಚಿತಪಡಿಸಿಕೊಳ್ಳಲು ಅದನ್ನು ಪರೀಕ್ಷೆಗಾಗಿ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ವಿಜ್ಞಾನ ಕೇಂದ್ರಕ್ಕೆ (VSSC) ಕಳುಹಿಸಲಾಗಿದೆ. ಒಂದು ವೇಳೆ ಈ ಚಿನ್ನವು ದೇವಾಲಯದ ಮೂಲ ಕಲಾಕೃತಿಗಳಿಗೆ ಹೊಂದಿಕೆಯಾಗದಿದ್ದರೆ, ಕಳವು ಮಾಡಿದ ಚಿನ್ನವನ್ನು ಅಂತರಾಷ್ಟ್ರೀಯ ಕಲಾಕೃತಿ ಕಳ್ಳಸಾಗಣೆ ಜಾಲಕ್ಕೆ ಮಾರಾಟ ಮಾಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಸದ್ಯ ರೊದ್ದಂ ಜ್ಯುವೆಲ್ಲರಿಯ ಮಾಲೀಕ ಗೋವರ್ಧನ್‌ನನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ.





Comments