ಕೆಟ್ಟ ಚಟಗಳಿಗೆ ತಂದೆಯ ಹಣ ಖರ್ಚು ಮಾಡಿ, ಪ್ರಶ್ನಿಸಿದ್ದಕ್ಕೆ ಅಪ್ಪನ ಮೇಲೆ ಮಗಳ ನಿರ್ದಯ ಹಲ್ಲೆ
- sathyapathanewsplu
- Jan 9
- 1 min read

ಕೆಟ್ಟ ಅಭ್ಯಾಸಗಳಿಗೆ ಕುಟುಂಬದ ಸಂಪೂರ್ಣ ಹಣವನ್ನು ಖರ್ಚು ಮಾಡಿ, ಅದನ್ನು ಪ್ರಶ್ನಿಸಿದ ತಂದೆಯ ಮೇಲೆಯೇ ಮಗಳು ಮನಬಂದಂತೆ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ನಡೆದ ಸ್ಥಳದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ವೈರಲ್ ವಿಡಿಯೋ ಪ್ರಕಾರ, ಮಗಳು ತನ್ನ ಕೆಟ್ಟ ಚಟಗಳಿಗಾಗಿ ತಾಯಿಯ 18 ಲಕ್ಷ ರೂಪಾಯಿ ಹಣವನ್ನು ಸಂಪೂರ್ಣವಾಗಿ ವ್ಯಯಿಸಿದ್ದಾಳೆ. ಈ ವಿಚಾರವನ್ನು ತಂದೆ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಕೋಪಗೊಂಡ ಮಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿ, ತಂದೆಯ ಮೇಲೆಯೇ ಹಲ್ಲೆ ನಡೆಸಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ.
ತನ್ನ ಜೀವನವನ್ನೇ ಮಗಳಿಗಾಗಿ ಅರ್ಪಿಸಿಕೊಂಡು, ಕಷ್ಟಪಟ್ಟು ದುಡಿದ ತಂದೆ, ಮಗಳ ಈ ಅಚಾತುರ್ಯ ಮತ್ತು ನಿರ್ದಯ ವರ್ತನೆಯಿಂದ ತೀವ್ರ ಮಾನಸಿಕ ನೋವಿಗೆ ಒಳಗಾಗಿದ್ದಾರೆ. ವಿಡಿಯೋದಲ್ಲಿ, ಮಗಳು ತಂದೆಯೊಂದಿಗೆ ಜಗಳವಾಡುವುದಷ್ಟೇ ಅಲ್ಲದೆ, ಅವಮಾನಕಾರಿ ಪದಗಳಿಂದ ನಿಂದಿಸಿ, ಅವರನ್ನು ನಪುಂಸಕನೆಂದು ಕರೆಯುತ್ತಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ತಂದೆ ಕುರ್ಚಿಯಲ್ಲಿ ಮೌನವಾಗಿ ಕುಳಿತಿರುವುದು, ಕಣ್ಣಂಚಲ್ಲಿ ಕಣ್ಣೀರು ತುಂಬಿಕೊಂಡಿರುವ ದೃಶ್ಯಗಳು ನೋಡುಗರ ಮನಕಲಕುವಂತಿವೆ. ಹಣದ ವಿಚಾರದಿಂದ ಆರಂಭವಾದ ವಿವಾದ, ನಂತರ ಮಾನಸಿಕ ಹಾಗೂ ದೈಹಿಕ ಹಲ್ಲೆಯಾಗಿ ಪರಿಣಮಿಸಿರುವುದು ಆತಂಕ ಹುಟ್ಟಿಸಿದೆ.
ಈ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ಮಗಳ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಪೋಷಕರ ಮೇಲೆ ಕೈ ಎತ್ತುವುದು ಅಕ್ಷಮ್ಯ ಅಪರಾಧ”, “ಇಂತಹ ಘಟನೆಗಳು ಸಮಾಜದ ಮೌಲ್ಯ ಕುಸಿತವನ್ನು ತೋರಿಸುತ್ತವೆ” ಎಂಬ ಪ್ರತಿಕ್ರಿಯೆ ಗಳು ಹರಿದುಬರುತ್ತಿವೆ





Comments