ಬೆಟ್ಟಂಪಾಡಿ: ಓವರ್‌ಲೋಡ್‌ನಿಂದ ರಸ್ತೆ ಮಧ್ಯೆ ನಿಂತ KSRTC ಬಸ್; ವಿದ್ಯಾರ್ಥಿಗಳ ಪರದಾಟ
- sathyapathanewsplu
- Oct 28
- 1 min read

ಬೆಟ್ಟಂಪಾಡಿ: (ಅ .28) ಬೆಟ್ಟಂಪಾಡಿ-ಕೌಡಿಚ್ಚಾರು ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್ಸು ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ತುಂಬಿದ್ದರಿಂದಾಗಿ ರಸ್ತೆಯ ಮಧ್ಯಭಾಗದ ಏರು ದಾರಿಯಲ್ಲಿ ನಿಂತು ಹೋದ ಘಟನೆ ವರದಿಯಾಗಿದೆ.

ಬೆಟ್ಟಂಪಾಡಿ-ಕೌಡಿಚ್ಚಾರು ಮಾರ್ಗದಲ್ಲಿ ಸಾಗುತ್ತಿದ್ದ ಈ ಬಸ್‌ನ ಸಾಮರ್ಥ್ಯಕ್ಕೆ ಮೀರಿದ ಜನರ ಸಾಗಾಟ ಇತ್ತು. ಇದರಿಂದ ಬಸ್ ಮುಂದಕ್ಕೆ ಚಲಿಸಲು ಸಾಧ್ಯವಾಗದೆ ದಾರಿಯ ಮಧ್ಯೆ ನಿಂತಿತು.
ಬಸ್ ಮಧ್ಯೆ ನಿಂತ ಕಾರಣ, ಪ್ರತಿದಿನ ಈ ಮಾರ್ಗದಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಇತರ ಪ್ರಯಾಣಿಕರು ತೀವ್ರವಾಗಿ ಪರದಾಡಬೇಕಾಯಿತು.
ಈ ಪ್ರದೇಶಕ್ಕೆ ಸೀಮಿತ ಸಂಖ್ಯೆಯ ಬಸ್ಸುಗಳ ಸೌಲಭ್ಯವೇ ಈ ಸಮಸ್ಯೆಗೆ ಮೂಲ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಂಬಂಧಿಸಿದ ಅಧಿಕಾರಿಗಳು ಈ ಮಾರ್ಗಕ್ಕೆ ಹೆಚ್ಚುವರಿ ಬಸ್ ಸೌಲಭ್ಯವನ್ನು ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
For Advertisement Contact:
Would you like to promote your business, service, or product on our sathyapatha news plus website?
Please contact for advertisements: 9880834166 / WhatsApp






Comments