ಸಮಂತಾ ಸೈಲೆಂಟ್ ಮರುಮದುವೆ: ಇಶಾ ಯೋಗ ಕೇಂದ್ರದಲ್ಲಿ ರಾಜ್ ನಿಧಿಮೋರ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನಟಿ!
- sathyapathanewsplu
- Dec 2
- 1 min read

ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಅವರು ಯಾವುದೇ ಅದ್ದೂರಿತನವಿಲ್ಲದೆ ಸಿಂಪಲ್ ಆಗಿ ಮರುಮದುವೆಯಾಗಿದ್ದಾರೆ. ಈ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಸಮಂತಾ ಅವರು ತಮ್ಮ ಆಪ್ತ ಗೆಳೆಯ ರಾಜ್ ನಿಧಿಮೋರ್ ಜೊತೆ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಯೋಗ ಕೇಂದ್ರದ ಲಿಂಗ ಭೈರವಿ ದೇವಸ್ಥಾನದಲ್ಲಿ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇವಲ 30 ಆಪ್ತ ಅತಿಥಿಗಳ ಸಮ್ಮುಖದಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಸಮಂತಾ ಅವರು ಕೆಂಪು ಸೀರೆಯಲ್ಲಿ ಮಿಂಚಿದರೆ, ಮದುಮಗ ರಾಜ್ ನಿಧಿಮೋರ್ ಬಿಳಿ ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಜೋಡಿ ಡೇಟಿಂಗ್ ಮಾಡುತ್ತಿದ್ದು, ಇತ್ತೀಚೆಗೆ ಕ್ಯಾಮರಾ ಕಣ್ಣಿಗೆ ಬೀಳುತ್ತಿದ್ದಂತೆ ಹಾಗೂ ಸ್ಯಾಮ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರೂ ಒಟ್ಟಿಗಿರುವ ಫೋಟೋಗಳನ್ನು ಹಂಚಿಕೊಂಡಾಗಿನಿಂದ ಇವರ ಮದುವೆ ಸುದ್ದಿ ಗಟ್ಟಿಯಾಗಿತ್ತು.
ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಮೂರು ವರ್ಷಗಳ ನಂತರ ಸಮಂತಾ ಹೊಸ ಜೀವನ ಆರಂಭಿಸಿದ್ದಾರೆ. ಆದರೆ, ನಟಿ ತಮ್ಮ ಎರಡನೇ ಮದುವೆಯ ವಿಚಾರದಲ್ಲಿ ಮಾಜಿ ಪತಿ ನಾಗ ಚೈತನ್ಯ ಅವರನ್ನು ಫಾಲೋ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ನಾಗ ಚೈತನ್ಯ ಅವರು ಕೂಡ ನಟಿ ಶೋಭಿತಾ ಧೂಳಿಪಾಲ್ ಅವರನ್ನು ಡಿಸೆಂಬರ್ ತಿಂಗಳಲ್ಲೇ ವಿವಾಹವಾಗಿದ್ದರು. ಚೈತನ್ಯ ಅವರು ಡಿಸೆಂಬರ್ 4, 2024 ರಂದು ವಿವಾಹವಾದರೆ, ಸಮಂತಾ ಕೂಡ ಡಿಸೆಂಬರ್ ತಿಂಗಳಲ್ಲೇ ಮರುಮದುವೆಯಾಗಿದ್ದಾರೆ. ಈ ಕಾಕತಾಳೀಯವನ್ನು ಗಮನಿಸಿದ ನೆಟ್ಟಿಗರು, "ಸಮಂತಾ ನಾಗ ಚೈತನ್ಯ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾರಾ?" ಎಂದು ಕಾಮೆಂಟ್‌ಗಳಲ್ಲಿ ಪ್ರಶ್ನಿಸುತ್ತಿದ್ದಾರೆ.
ಸಮಂತಾ ಮತ್ತು ನಾಗ ಚೈತನ್ಯ ಅವರ ಮೊದಲ ವಿವಾಹವು 2017ರಲ್ಲಿ ಅದ್ದೂರಿಯಾಗಿ ನಡೆದಿತ್ತು. 2010ರಲ್ಲಿ 'ಯೆಮಾಯಾ ಚೆಸಾವೆ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸ್ಯಾಮ್, ತಮ್ಮ ಚೊಚ್ಚಲ ಚಿತ್ರದ ಶೂಟಿಂಗ್ ವೇಳೆ ನಾಗ ಚೈತನ್ಯ ಅವರಿಗೆ ಹತ್ತಿರವಾಗಿದ್ದರು. ಕೆಲವು ವರ್ಷಗಳ ಕಾಲ ಪ್ರೀತಿಸಿದ್ದ ಈ ಜೋಡಿ 2017ರಲ್ಲಿ ವಿವಾಹವಾಗಿತ್ತು. ಆದರೆ, ಇವರ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ನಾಲ್ಕು ವರ್ಷಗಳ ನಂತರ ಅಕ್ಟೋಬರ್ 2, 2021 ರಂದು ಇಬ್ಬರೂ ವಿಚ್ಛೇದನ ಘೋಷಿಸಿದರು. ವಿಚ್ಛೇದನದ ಬಳಿಕ ನಾಗ ಚೈತನ್ಯ ಅವರು ಶೋಭಿತಾ ಅವರನ್ನು 2024ರ ಡಿಸೆಂಬರ್ 4 ರಂದು ಸದ್ದಿಲ್ಲದೆ ಮದುವೆಯಾಗಿದ್ದರು. ಈಗ ಸಮಂತಾ ಕೂಡ ಡಿಸೆಂಬರ್ ತಿಂಗಳಲ್ಲೇ ರಾಜ್ ನಿಧಿಮೋರ್ ಜೊತೆ ಮರುಮದುವೆಯಾಗುವ ಮೂಲಕ ಹೊಸ ಅಧ್ಯಾಯ ಆರಂಭಿಸಿದ್ದಾರೆ.






Comments