ಮತ್ತೆ ಏರಿಕೆ ಕಂಡ ಚಿನ್ನದ ದರ-ಇಂದಿನ ರೇಟ್ ಚೆಕ್ ಮಾಡಿ
- sathyapathanewsplu
- Nov 11
- 1 min read

ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆಯ ಹೆಚ್ಚಳ ಆಗಿದೆ. ಇಂದು ಬರೋಬ್ಬರಿ 2460 ರೂಪಾಯಿ ಏರಿಕೆ ಆಗಿದ್ದು, ಚಿನ್ನಾಭರಣ ಪ್ರಿಯರಿಗೆ ಭಾರಿ ನಿರಾಸೆ ಉಂಟಾಗಿದೆ. ಈ ವಾರದ ಆರಂಭಿಂದಲೇ ಗರಿಷ್ಠ ಹೆಚ್ಚಳವನ್ನು ಚಿನ್ನದ ಬೆಲೆ ದಾಖಲಿಸುತ್ತಿದೆ.
ನವೆಂಬರ್ 11 ಮಂಗಳವಾರದಿಂದ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,628 ರೂಪಾಯಿ ಇದ್ದು, ಇಂದು 246 ರೂಪಾಯಿ ಹೆಚ್ಚಳ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,26,280 ರೂಪಾಯಿ ಇದೆ. 24 ಕ್ಯಾರೆಟ್ ಬೆಲೆಯಲ್ಲಿ ಇಂದು ಒಟ್ಟು 2460 ರೂ ಹೆಚ್ಚಳ ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ 11,575 ರೂಪಾಯಿ ಇದ್ದು, 110 ರೂ ಹೆಚ್ಚಳ ಕಂಡಿದೆ. 10 ಗ್ರಾಂ ಬೆಲೆ 1,15,750 ರೂಪಾಯಿ ಇದೆ. ಇಂದು 2250 ರೂ ಏರಿಕೆ ಆಗಿದೆ.
1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12322 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,23,220 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.
ಬೆಳ್ಳಿ ಬೆಲೆ ಏರಿಕೆ
ಬೆಳ್ಳಿ ಬೆಲೆ ಇಂದು ಭಾರಿ ಏರಿಕೆ ಆಗಿದ್ದು, ಗ್ರಾಂ ನಲ್ಲಿ ಮೂರು ರೂಪಾಯಿ ಹೆಚ್ಚಳ ಆಗಿ 160 ರೂಪಾಯಿಯಾಗಿದ್ದು, ಕೆಜಿಗೆ 1,60,000 ರೂ ಇದೆ.






Comments