ಇಂದಿನ ಹವಾಮಾನ: ಎರಡು ದಿನ ಮಳೆ ಮುನ್ಸೂಚನೆ
- sathyapathanewsplu
- 2 days ago
- 1 min read

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮೋಡ ಕವಿದ ವಾತಾವರಣ ಹಾಗೂ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಿಂದ ಬೀಸುತ್ತಿರುವ ಹಿಂಗಾರು ಮಾರುತಗಳು ಚುರುಕುಗೊಂಡಿರುವುದು ಈ ಹವಾಮಾನ ಬದಲಾವಣೆಗೆ ಮುಖ್ಯ ಕಾರಣವಾಗಿದೆ.
ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಮೈ ಕೊರೆಯುವ ಚಳಿ ಇತ್ತು. ಆದರೆ ಇದೀಗ ಮೋಡ ಕವಿದ ವಾತಾವರಣ ಇರುವುದರಿಂದ ಹಗಲು ವೇಳೆ ತಣ್ಣನೆಯ ಅನುಭವವಾಗಲಿದ್ದು, ರಾತ್ರಿ ಸಮಯದಲ್ಲಿ ಚಳಿಯ ತೀವ್ರತೆ ಕೊಂಚ ತಗ್ಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ದಿನಗಳ ನಂತರ ಹವಾಮಾನವು ಮತ್ತೆ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ.






Comments