ಋತುಚಕ್ರದ ರಜೆ ಆದೇಶಕ್ಕೆ ಹೈಕೋರ್ಟ್‌ನ ತಾತ್ಕಾಲಿಕ ತಡೆ; ಗಂಟೆಗಳಲ್ಲೇ ಆದೇಶ ಹಿಂಪಡೆ
- sathyapathanewsplu
- Dec 10
- 1 min read

ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರದ ಮುಟ್ಟಿನ ಕಡ್ಡಾಯ ರಜೆ ಆದೇಶಕ್ಕೆ ತಡೆ ನೀಡಿದೆ. ನ. 12ರಂದು ಜಾರಿಯಾಗಿದ್ದ ಈ ಆದೇಶದ ವಿರುದ್ಧ ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್ ಮೊರೆ ಹೋಗಿತ್ತು. ವಿವಿಧ ಕಾರ್ಮಿಕ ಕಾಯ್ದೆಗಳ ಅಡಿಯಲ್ಲಿ ಬರುವ ಸಂಸ್ಥೆಗಳ ಮಹಿಳೆಯರಿಗೂ ಈ ರಜೆ ಅನ್ವಯವಾಗುತ್ತದೆ ಎಂದು ಸರ್ಕಾರ ಸೂಚಿಸಿತ್ತು. ಆದರೆ, ರಜೆ ನೀತಿಗಳು ಆಂತರಿಕ ಆಡಳಿತಾತ್ಮಕ ವಿಷಯ ಎಂದು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್ ನಲ್ಲಿ ತಕರಾರು ತಗೆದಿದೆ. ಸಂಘದ ವಾದ ಆಲಿಸಿದ ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠ ತಡೆಯಾಜ್ಞೆ ನೀಡಿತ್ತು.
ಆದರೆ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ನೀಡಿದ್ದ ತನ್ನದೇ ತಡೆಯಾಜ್ಞೆಯನ್ನು ಏಕಸದಸ್ಯ ನ್ಯಾಯಪೀಠವೊಂದು ಕೆಲವೇ ಗಂಟೆಗಳ ಅಂತರದಲ್ಲಿ ತೆರವುಗೊಳಿಸಿದ ಅಪರೂಪದ ಘಟನೆಗೆ ಕರ್ನಾಟಕ ಹೈಕೋರ್ಟ್ ಸಾಕ್ಷಿಯಾಯಿತು.






Comments