ಸಂತ ಅಲೋಶಿಯಸ್ ಕಾಲೇಜಿನ ಮಾಜಿ ರೆಕ್ಟರ್ ಫಾ. ಲಿಯೋ ಡಿಸೋಜ ನಿಧನ
- sathyapathanewsplu
- 2 days ago
- 1 min read

ಮಂಗಳೂರು: ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಮಾಜಿ ರೆಕ್ಟರ್ ಹಾಗೂ ಪ್ರಾಂಶುಪಾಲ ಫಾ. ಲಿಯೋ ಡಿಸೋಜ (93) ಮಂಗಳವಾರ ನಿಧನರಾದರು. ಮಂಗಳೂರಿನಲ್ಲಿ ಜನಿಸಿ, ಅಲೋಶಿಯಸ್ ಸಂಸ್ಥೆಯಲ್ಲೇ ಶಿಕ್ಷಣ ಪಡೆದಿದ್ದ ಇವರು, ದಶಕಗಳ ಕಾಲ ಅದೇ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ್ದರು. ಪ್ರಾಂಶುಪಾಲರಾಗಿ ಮತ್ತು ರೆಕ್ಟರ್ ಆಗಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಅವರು, ಹಿರಿಯ ಶಿಕ್ಷಣ ತಜ್ಞರಾಗಿ ಗುರುತಿಸಿಕೊಂಡಿದ್ದರು. ಅವರ ನಿಧನಕ್ಕೆ ಶಿಕ್ಷಣ ಪ್ರೇಮಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.





Comments