ಚಿನ್ನ, ಬೆಳ್ಳಿ ದರ ಸಾರ್ವಕಾಲಿಕ ದಾಖಲೆ: ಕೆಜಿ ಬೆಳ್ಳಿಗೆ 3.20 ಲಕ್ಷ ರೂ.!
- sathyapathanewsplu
- 2 days ago
- 1 min read

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತದ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ದರಗಳು ಗಗನಕ್ಕೇರಿವೆ. ಮಂಗಳವಾರ ಬೆಳ್ಳಿ ಬೆಲೆಯಲ್ಲಿ ಭಾರಿ ಜಿಗಿತ ಕಂಡುಬಂದಿದ್ದು, ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 3.20 ಲಕ್ಷ ರೂಪಾಯಿ ತಲುಪಿದೆ. ದೆಹಲಿಯಲ್ಲಿ ಒಂದೇ ದಿನ 20,400 ರೂ. ಏರಿಕೆ ಕಾಣುವ ಮೂಲಕ ಬೆಲೆ 3.23 ಲಕ್ಷ ರೂ.ಗೆ ಏರಿದೆ.
ಚಿನ್ನದ ಬೆಲೆಯೂ ಹಿಂದೆ ಬಿದ್ದಿಲ್ಲ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 1,49,780 ರೂ. ತಲುಪಿದ್ದರೆ, ದೆಹಲಿಯಲ್ಲಿ ಇದು 1.53 ಲಕ್ಷ ರೂ. ದಾಟಿದೆ. ಅಮೆರಿಕ-ಯುರೋಪ್ ನಡುವಿನ ತೆರಿಗೆ ಸಮರ ಹಾಗೂ ಇರಾನ್ ಮೇಲಿನ ಯುದ್ಧದ ಭೀತಿಯಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನ-ಬೆಳ್ಳಿಯತ್ತ ಮುಖ ಮಾಡಿದ್ದಾರೆ. ಅಲ್ಲದೆ, ಕೈಗಾರಿಕಾ ವಲಯದಿಂದ ಬೆಳ್ಳಿಗೆ ವಿಪರೀತ ಬೇಡಿಕೆ ಬಂದಿರುವುದು ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.





Comments